About Us

ಶ್ರೀ ಕ್ಷೇತ್ರದ ಮಹಿಮೆಯ ಪರಿಚಯ
 
ಶ್ರೀ ಮುನೇಶ್ವರ ಸ್ವಾಮಿ ಪ್ರಸನ್ನ ಶ್ರೀ ಚೌಡೇಶ್ವರಿ ಅನುಗ್ರಹ
 
ಚಿನ್ನಪ್ಪ. ಪಿ ಎಂಬ ನಾನು ದಿನಾಂಕ:-01.06.1965 ರಂದು ಮುನಿವೆಂಕಟಮ್ಮ ಮತ್ತು ಪಿಳ್ಳಪ್ಪ ದಂಪತಿಗಳ ಮಗನಾಗಿ ಗಂಗಾನಗರ, ಆರ್. ಟಿ ನಗರ ಅಂಚೆ, ಬೆಂಗಳೂರು-560 032 ಇಲ್ಲಿ ಜನಿಸಿರುತ್ತೇನೆ. ತದನಂತರ ಪೌೃಢಶಿಕ್ಷಣ ವ್ಯಾಸಂಗ ಮಾಡುತಿದ್ದಾಗಿನಿಂದಲೇ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ನಿರತನಾಗಿರುತ್ತೇನೆ.
 
ವೃತಿಯಲ್ಲಿ ಸಮಾಜಸೇವೆ ಮತ್ತು ಗುತಿಗೆದಾರನಾಗಿ ಕೆಲಸ ನಿರ್ವಹಿಸುತ್ತಿರುವಾಗಲೇ ದಿನಾಂಕ:-17-05.1991ರಲ್ಲಿ ಕೋಮಲ ರವರನ್ನು ವಿವಾಹವಾಗಿ ತಂದೆಯವರ ಸ್ವಂತ ಸ್ಥಳವಾದ ಸರ್ಜಾಪುರ ರಸ್ತೆಯಲ್ಲಿನ ಕೊಡತಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿ ಸನ್ನಿಧಾನದಲ್ಲಿ ವಿವಾಹ ನಂತರದ ಮೊದಲನೇ ಪೂಜೆ ನೆರವೇರಿಸಿ ನಂತರದ ಜೀವನದಲ್ಲಿ ಅಭಿವೃದ್ಧಿ ಹೊಂದಿದಲ್ಲಿ ಶ್ರೀ ಮುನೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡುವುದಾಗಿ ಪ್ರಾರ್ಥಿಸಿಕೊಂಡಿರುತ್ತೇನೆ.
 
ಸ್ವಾಮಿಯ ಕೃಪೆಯಿಂದ ಅಭಿವೃದ್ಧಿ ಹೊಂದಲಾಗಿ ವೈಯಕಿಕ ಕಾರಣಗಳಿಂದಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಸ್ವಲ್ಪ ತಡವಾಗಿರುತ್ತದೆ. ತೋಟ ನಿರ್ಮಾಣಕ್ಕಾಗಿ ಸುಮಾರು ಕಡೆ ಜಾಗಕ್ಕಾಗಿ ಹುಡುಕಾಟ ನಡೆಸುತಿರುವಾಗ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ಸಾಸಲು ಹೋಬಳಿ, ಆರೋಡಿ ಗ್ರಾಮದ ಹತಿರ ಜಾಗ ಖರೀದಿಸಲಾಯಿತು.
 

ತೋಟದ ಅಭಿವೃದ್ಧಿ / ಮೇಲ್ವಿಚಾರಣೆಗಾಗಿ ಆಗಿಂದ್ದಾಗ್ಗೆ ಭೇಟಿ ನೀಡುತಿದ್ದ ಸಂದರ್ಭದಲ್ಲಿ ಒಂದು ದಿವಸ ರಾತ್ರಿ ತಂಗಿದ್ದಾಗ ಮಧ್ಯರಾತ್ರಿಯಲ್ಲಿ ಹೊರಗಿನಿಂದ ಯಾರೋ ಕೂಗಿದಂತೆ ಶಬ್ದ ಕೇಳಿ ಬಂದಿದ್ದರಿಂದ ಮನೆಯಿಂದ ಹೊರಗೆ ಬಂದು ನೋಡಿದಾಗ ವಿಚಿತ್ರವಾದ ರೂಪ ಕಂಡು ಬಂದು ಭಯದಿಂದ ಮನೆಯ ಒಳಗೆ ಹೋಗೋಣವೆಂದು ಹಿಂದಿರುಗಿದಾಗ ಭಯಪಡಬೇಡ ನಾನೇನು ಮಾಡುವುದಿಲ್ಲ ನಿನಗೇನು ಆಗುವುದಿಲ್ಲ ಮುಂದೆ ಓಳ್ಳೆಯದಾಗುವುದೆಂಬ ಅಶರೀರವಾಣಿ ಕೇಳಿಸಿರುತ್ತದೆ. ಮರುದಿನ ಬೆಳಗ್ಗೆ ಮನೆಯ ಬಾಗಿಲ ಬಳಿ ಕಣ್ಣ ಮುಂದೆಯೇ ಸರ್ಪವು ಹಾದು ಹೋಗಿರುತ್ತದೆ.

ಈ   ಹಿಂದೆ ಅಂದುಕೊಂಡಂತೆ ಕೊಡತಿ ಗ್ರಾಮದಲ್ಲಿ ಶ್ರೀ ಮುನೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಿಸಬೇಕೆಂದುಕೊಂಡಿದ್ದೆ, ತೋಟದಮನೆಯಲ್ಲಿ ಜಪಕ್ಕೆ ಕುಳಿತಾಗ ಹಾಗೂ ಕನಸಿನಲ್ಲೂ ಸಹ ಆಗಿಂದಾಗ್ಗೆ ಸ್ವಾಮಿಯು ಅನುಗ್ರಹವಾಗಿ ಎಲ್ಲೆಲ್ಲೂ ನಾನೇ ನನ್ನ ಸನ್ನಿಧಾನವನ್ನು ಈಗಿನ ತೋಟದಲ್ಲಿಯೇ ನಿರ್ಮಾಣ ಮಾಡುವಂತೆ ಕೃಪೆಯನ್ನಿಟ್ಟಿರುತ್ತಾರೆ. ಸದರಿ ಹೊಸ ಜಾಗದಲ್ಲಿ ಶ್ರೀ ಮುನೇಶ್ವರ ಸ್ವಾಮಿಯ

ದೇವಸ್ಥಾನ  ಎಂದು ಪ್ರಾರಂಭಿಸಿ  ನಡೆಸಬೇಕೆಂದ್ದಿದ್ದೆ,ಆಗಿನ  ಶಾಸ್ರಿಗಳಾದಂತಹ  ಡಾ||     ವಾಸುದೇವ್  ಭಟ್ ರವರು ಮಾರ್ಗದರ್ಶನ ನೀಡಿ ಶ್ರೀ ಮುನೇಶ್ವರ ಸ್ವಾಮಿಯ ದೇವಸ್ಥಾನವೆಂದರೆ ಪುಣ್ಯಕ್ಷೇತ್ರವಾಗುವುದಿಲ್ಲ ಎಂದು ತಿಳಿಸಿದರಿಂದ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ ಎಂದು ಹೆಸರಿಸಿ  ನಿರ್ಮಾಣ ಕಾರ್ಯ  ಪ್ರಾರಂಭಿಸಲಾಯಿತು.          ನಿರ್ಮಾಣ ಕಾರ್ಯಕ್ಕೆ  ತುಂಬಾ              ಅಡೆತಡೆಗಳು ಹಾಗೂ             ತೊಂದರೆಗಳು  ಎದುರಾದ್ದರಿಂದ

ಪುನಃ ಶಾಸ್ರಿಗಳನ್ನು ಬೇಟಿಮಾಡಿದಾಗ ಶಾಸ್ರಿಗಳು ನಿಮಗೆ ಅಮ್ಮನವರ ಅನುಗ್ರಹ ಹೆಚ್ಚಾಗಿರುವುದರಿಂದ ಶ್ರೀ ಪಾರ್ವತಿ ಸೋಮೇಶ್ವರ ದೇವಸ್ಥಾನ ಎಂದು ಕರೆಯುವಂತೆ ಸೂಚನೆ ನೀಡಿದರು ನಂತರ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಾರಂಭಿಸಿದವು. ನಿರ್ಮಾಣ ಕಾರ್ಯ ನಡೆಯುತಿರುವಾಗಲೇ ಈ ಜಾಗದಲ್ಲಿ ಪರಿಚಯಸ್ಥರು ಯಾರೂ ಇಲ್ಲವೆಂದು ಸ್ವಾಮಿಯ ಮೊರೆ ಹೋದಾಗ ಸ್ವಾಮಿಯವರು ದೇವಸ್ಥಾನ ನಿರ್ಮಾಣ ಕಾರ್ಯ ನಿನ್ನದು ಭಕ್ತರನ್ನು ಸೇರಿಸುವ ಭಾರ ನನ್ನದು ಎಂದು ವಚನ ನೀಡಿರುತ್ತಾರೆ. ಭಗವಂತನ ಕೃಪೆಯಿಂದ ದೇವಸ್ಥಾನ ನಿರ್ಮಾಣ ಕಾರ್ಯವನ್ನು 2010ನೇ ಇಸವಿಯಲ್ಲಿ ಪ್ರಾರಂಭಿಸಿ 2013ರಲ್ಲಿ ಮುಕಾಯಗೊಳಿಸಲಾಗಿರುತ್ತದೆ. ದಿನಾಂಕ:-04-03.2013ರಂದು ಶ್ರೀ ಪಾರ್ವತಿ ಸೋಮೇಶ್ವರ ದೇವಸ್ಥಾನವನ್ನು ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಪಾರ್ವತಿ ಆದಿಶಕ್ತಿಯಾಗಿ ಸಪ್ತಮಾತೃಕೆಯರ ರೂಪದಲ್ಲಿ ಶ್ರೀ ಕೆಂಪಮ್ಮ ದೇವಿ ನನ್ನನ್ನು ಸಹ ಪ್ರತಿಷ್ಠಾಪಿಸುವಂತೆ ಹಾಗೂ ಪ್ರತಿ ಬಸವನ ಜಯಂತಿಯಂದು ಕೊಂಡ ಹಾಯಿಸುವಂತೆ ಸರ್ಪರೂಪದಲ್ಲಿ ಗೋಚರಿಸಿ ತಿಳಿಸಿರುತ್ತಾರೆ ಹಾಗೂ ಭಕ್ತರು ಕಷ್ಠಗಳನ್ನು ಪರಿಹರಿಸುವಂತೆ ಮೊರೆಯನ್ನಿಟ್ಟಲ್ಲಿ ಅಮ್ಮನವರೇ ಎಲ್ಲಾ ಕಷ್ಠಗಳನ್ನು ಬಗೆಹರಿಸುವುದಾಗಿ ವಾಗ್ದಾನ ನೀಡಿರುತ್ತಾರೆ. ಅದರಂತೆ 2014ರಲ್ಲಿ ಶ್ರೀ ಆದಿಶಕಿ ಕೆಂಪಮ್ಮ ದೇವಿಯವರ ದೇವಸ್ಥಾನವನ್ನು ಪ್ರತಿಷ್ಠಾಪಿಸಿ 2014ರ ಬಸವನ ಜಯಂತಿಯಿಂದ ಕೊಂಡ ಹಾಯಿಸುವುದನ್ನು ಪ್ರಾರಂಭಿಸಲಾಯಿತು. ಅಮ್ಮನವರ ಕೃಪೆಗೆ ಪಾತ್ರರಾಗಿ ಅನುಕೂಲಸ್ಥ ಭಕ್ತಾಧಿಗಳು ಅಮ್ಮನವರಿಗೆ ಆರತಿ, ಕಳಸ, ಮಡ್ಲಕ್ಕಿ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಸಮರ್ಪಿಸುವುದರೊಂದಿಗೆ ಸಕ್ರಿಯವಾಗಿ ಭಾಗವಹಿಸುತ್ತಾ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಹಕರಿಸುತಿರುತ್ತಾರೆ.

ಈಗಲೂ ಶ್ರೀ ಕ್ಷೇತ್ರ ಶ್ರೀ ಪಾರ್ವತಿ ಸೋಮೇಶ್ವರ ಮತ್ತು ಸಪ್ತ ಮಾತೃಕೆಯರ ದೇವಸ್ಥಾನದ ಪ್ರತಿ ನಿತ್ಯ ಪೂಜೆ ನಡೆಯುತಿದ್ದು ಪ್ರತಿ ಅಮವಾಸ್ಯೆಯಂದು ಗಂಗೆ ಪೂಜೆ ಮತ್ತು ಅಮ್ಮನವರಿಗೆ ಸಂಪ್ರದಾಯದಂತೆ ತೂಗುಯ್ಯಾಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತಿದೆ.

ಶ್ರೀ ಕ್ಷೇತ್ರದ ವಿಸ್ಮಯವನ್ನು ಕಾಣಬೇಕಾದಲ್ಲಿ ಶ್ರೀ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿ ಸ್ವಾಮಿಯನ್ನು ಪ್ರಾರ್ಥಿಸಿದಲ್ಲಿ ಮನಸ್ಸಿನಲ್ಲಿ ಅಂದುಕೊಂಡದ್ದು ನೆರವೇರುತ್ತದೆ. ಯಾವುದೇ ಕಷ್ಟಗಳಿದ್ದರೂ ಸಮಸ್ಯೆಗಳಿದ್ದರೂ ಶ್ರೀ ಕ್ಷೇತ್ರದಲ್ಲಿ ಪರಿಹಾರವಾಗುತ್ತವೆ.

 

ಶ್ರೀ ಚಿನ್ನಪ್ಪ ಸ್ವಾಮಿಗಳು,

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರು, ದೈವಾಂಶ ಸಂಭೂತರು

 

Contact Us

Parvathi Someshwara Trust

Arodi village,Saaslu
Doddaballapur(Tq), Bangalore rural(Dist)
-561203

Ph: +91-9448045537 / +91-8660580325
 www.parvathisomeshwara.org / info@parvathisomeshwara.org